Powered By Blogger

Sunday, August 15, 2021

ಯಾರು ಇಲ್ಲದ ಮನೆ

 

ಯಾರು ಇಲ್ಲದ ಮನೆ
ಯಾರೋ ಕೂಗಿದ ಧಣಿ
ಏನು ಹೇಳದ ಮನ
ಕಣ್ಣ ದಾಟದ ಹನಿ ..||

ತುಂಬಾ ತಿರುಗಿದೆ ಧರೆ ...
ಎಲ್ಲಿ ಹೋಯಿತೋ ಗುರೀ
ಎಲ್ಲ ತಪ್ಪೇ ಆದರೆ ಇಲ್ಲಿ ಯಾವದು ಸರಿ

ಮನೆಯೇ ಮನೆಯೇ ಮಾತನಾಡು
ಮನಸು ಬಿಚ್ಚಿ ಹೇಳು  ಹಾಡು ||

ಯಾರು ಇಲ್ಲದ ಮನೆ
ಯಾರೋ ಕೂಗಿದ ಧಣಿ
ಏನು ಹೇಳದ ಮನ
ಕಣ್ಣ ದಾಟದ ಹನಿ .,,

 ಮುಗಿದಷ್ಟು ಮಾತಿನಲ್ಲಿ ಪಡೆದಷ್ಟೇ ಮೌನವು ...
ಉಳಿದಷ್ಟೂ ದಾರಿಯಲ್ಲಿ ನಡೆದಷ್ಟೇ ಯಾನವು ...
ಗೋಡೆಮೇಲೆ ಅಳುವ ಚಿತ್ರಗಳು ..
ಹೂವನೇ ಮರೆತ ನೆನಪಿನ ಚಿಟ್ಟೆಗಳು ..
ನಲಿವು ನಡೆದು ಹೋಯಿತು ಯಾವ್ ಬಾಗಿಲಲಿ ...

ನೆನಪೇ ನೆನಪೇ ಮಾತನಾಡು
ಮರೆತ ಒಂದು ಹಾಡು ಹೇಳು ||
ಯಾರು ಇಲ್ಲದ ಮನೆ
ಯಾರೋ ಕೂಗಿದ ಧಣಿ
ಏನು ಹೇಳದ ಮನ
ಕಣ್ಣ ದಾಟದ ಹನಿ .,,




Sunday, August 19, 2018

ಅಮ್ಮನಿಗೊಂದು ನನ್ನ ದೂರು ..



ಕಾಂಕ್ರೀಟ್ ನಾಡಿನಲ್ಲಿ ಕಣ್ಣೀರು ಹರಿಸಿದಾಗ ಕರುಳಿನ ಕೂಗು ನಿನಗೂ ಕೇಳುವುದೇ ಅಮ್ಮ ..
ಮಕ್ಕಳ ಗುಂಪೊಂದು ಅಮ್ಮನ ಜೊತೆ ತುತ್ತ್ತೊಂದ್ ಹಂಚಿಕೊಳ್ಳುವರು ಈ  ನೆನಪು  ನಿನಗೂ ಕಾಡುವುದೇ ಅಮ್ಮ ..
ಹೋಟೆಲ್ ಊಟ ಉಂಡು ಹೊಟ್ಟೆ ಬರುತಿಹದು ಒಂದು ಹೊತ್ತಾದರೂ ನಿನ್ನ ಕೈ ತುತ್ತು ಸಿಗಬಹುದೇ ಅಮ್ಮ ...
ಒಬ್ಬನೇ ದಿನ ಕಳೆದು ತಲೆ ಮಬ್ಬು ಹಿಡಿದಿದೆ ಔಷದಿಯ ಬದಲಾಗಿ ಒರಗಲು  ನಿನ್ನ ಮಡಿಲು ಸಿಗುವುದೇ ಅಮ್ಮ . .!!

ದಿನಬೆಳಿಗ್ಗೆ ನಿನ್ನ ನಾಮಸ್ಮರಣೆಯಿಂದೇಳುವೆನು ನಿನಗೂ ನನ್ನ ಹೆಸರು ನೆನಪಿದೆಯಾ ಅಮ್ಮ ..
ಕಷ್ಟಗಳು ಬಂದಾಗ ಒಬ್ಬನೇ ಕೂತು ಅಳುವೆನು ನೀ ಅರಿಯೆ ಅಮ್ಮ ..
ನಿದ್ದೆಯಲಿ ಎದ್ದು ಬಿಕ್ಕಿ  ಅಳುವೇ ನಿನಗೂ ನನ್ನ ಕನಸು ನಿನಗೆ ಬೀಳದೆ ಅಮ್ಮ..
ಮತ್ತದೇ ಬೆಳಿಗ್ಗೆ  ಕೃತಕ ನಗೆಯೊಂದಿಗೆ ನಡೆವೆ ಕಾರಣ ನೀನಮ್ಮ ..

ಹಬ್ಬ ಹರಿದಿನಗಳ ಸಿಹಿ ಖುಷಿ ಹಂಚಿಕೊಂಡಾಗ ನನಗು ಪಾಲು ಸಿಗುವುದೇ ಅಮ್ಮ
ನನಗಾಗಿ ಪ್ರತಿಕ್ಷಣ ಕಾಯುವ ಕಾತುರ ನಿನಗೆ ಇಲ್ಲವೇ ಅಮ್ಮ ..
ತುಸು ಎತ್ತರ ಬೆಳೆದಿಹೆನು  ಸ್ವಲ್ಪ್ ಧಿಮಾಕು ಕಳಿತಿಹೆನು ನೀ ನೋಡಲಾರೆಯಾ ಅಮ್ಮ ..
ನಿನ್ನೊಡನೆ  ಇರಲು  ಸೊಸೆ ಕಾಯುತಿಹಳು ಅವಕಾಶ ನೀ ಕೊಡಮ್ಮ ...

ನೂರು ದೇವರಿದ್ದರು  ನೂರು ದಾರಿಯಿದ್ದರೂ ನನ್ನ ಗುರು ನೀ ಅಮ್ಮ ..
ನಿನ್ನ ಬಿಟ್ಟು ನೂರು ವರುಷ ದೂರಿದ್ದರು ನಾ ನಿನ್ನ ಮಗುವೇ ಅಮ್ಮ ...
ಮತ್ತೊಂದ್ ಹೇಳ್ಬೇಕು ಮನಸಿನನೊಂದು ನೀ ಕೇಳುವೆಯ ಅಮ್ಮ ...
ನಿನಗೆ ಮಕ್ಕಳು ನೂರ ಇದ್ದರು ನಂಗೆ ಒಬ್ಬಳೇ ಅಮ್ಮ ನೀನಮ್ಮ ..


:) ಆಕ್ಷೀ


  

Tuesday, July 11, 2017

Listen

when I ask you listen to me 
And you start giving advice,
You have not ready to listen what i need to tell...

When I ask you listen to me and 
you begin to tell me why should't feel that way,
you are trampling on my feelings.

When I ask you to listen to  me
and you feel you have To do something to solve my problems
you have Failed me, strange as
that may seem.

Listen, All I asked was that you listen -Not talk or do, 
Just hear me.

When you do something for me 
That I can and need to do for myself,
you contribute to my fear and inadequacy.

But when you accept as a simple fact that i do feel what i feel,
no matter how irrational, then i can
quit trying to  convince you
and can get about the business of understanding what's behind this irrational feeling.
And when that's clear.
the answers are obvious and i don't need advice.


Irrational feelings make sense,
when we understand what's behind them.

Perhaps that's why hope works,
sometimes, for some people
 because God is mute and-
 he does't give advice or try
to fix things.



So please listen and just hear me.
And if you want to talk,
Wait a minute for your turn, and i'll listen to you....




Saturday, July 1, 2017

ಆಲಾಪಾ

ವಿವರಿಸಲಾಗದ ವಿಷಯಉಂಟು ಒಂದೊಂದೇ ಒಡಲಾದಲಿ..
ಬಣ್ಣಿಸಲಾಗದ ಭಾವನೆಯ ಬಲೆಯೊಂದು ಬೆಳೆದಿದೆ ನಿನ್ನೊಲವಲಿ ..
ಯಾವ ಜನುಮದ ಋಣವಿಂದು ಬೆಸೆದಿದೆ ಅರಿಯೇ ನಮ್ಮಲಿ  ,
ನೀ ನೀಲಿ ಮುಗಿಲ ನಾ ಮಿನುಗೋ  ಚಂದ್ರನಂತೆ ತೇಲಿ ತೇಲಿ !!

ಮರೆಯಲಿ  ಮುಸಿಕಿದ ಮಂದಹಾಸವ ಹೆಕ್ಕಿ ತಂದೆ ನಿ, ಇಷ್ಟೇ  ಸಾಕಲ್ಲವೇ ಸೋನೆ  ಅಲೆಯ ಸೊಬಗು ?
ಎತ್ತ ನೋಡಿದರು ಕಂಡೆ ನಿನ್ನ ಹೊಳಪು ,ಇಷ್ಟೇ ಸಾಕಲ್ಲವೇ ನಿನೀಡಿರುವ ಬೆಳಕು ?
ಹೇ ಹುಚ್ಚು ಮನವೆ  ಇನ್ನಾದರು ನೀ ಅರಿ ಆ ಸ್ವಚ್ಚ ಪ್ರೀತಿಯ ಪರಿ ,
 ಇದ್ಯಾವ ಮೌಢ್ಯ ಕಂಡೆ ನೀ ಸರಿ ? !!

 ಬೆಚ್ಚನೆಯ ತೋಳಿನಲಿ ಕಾಣದೆ ನಿನಗೆ ಅವಳ  ಬಚ್ಚಿಟ್ಟ ಭಾವಗಳ ಸಾರಃ ?
ಹೀಗೆಂದು  ಹಾಡುವುದೆನ್ನೆದೆ  ಪದೇ ಪದೇ ನಿನ್ನ ಪ್ರೀತಿಯ ಅಭಿಸಾರ ..


↭ಅ ಕ್ಷಿ❤


                                                      

Wednesday, April 26, 2017

ಉಸಿರಿನ ಉಷೆ


#ಉಸಿರಿನ ಉಷೆ#

ದಡದಲ್ಲಿ ನಿಂತು ನೋಡಿದ ಮಾತ್ರಕ್ಕೆ ಸಾಗರ ದಾಟಲಾಗದು 
ಹಪ್ಹ ಹಪಿಸಿ ಹೊಯ್ದ ಹತಾಸೆಯೆ ಜೀವನದ ಭಾಗವಾಗದು 
ತೋರು ಬೆರಳಿನಾ ತುದಿಯಲಿ ನನ್ನಾಸೆಗಳು ನುಸುಳಲು .. 
ನೀರಿನಂತರದಲಿ ಸಾಗಿದೆ ಉಸಿರಿನ ಉಷೆ ನಿನ್ನೊಡಲ ತಲುಪಲು .. 



ಬಂಡೆಗಲ್ಲ್ಯೆಯ ಬದಿಗೆ ನಾ ಬರೆದ ನಿನ್ನೆಸರ ಮಳೆ ಬಂದು ಅಳಿಸಿತೇ ?
ಬೀದಿ ಬೀದಿ ಸುತ್ತಿದಾ ಆ ಬಯಲೂ ಸೀಮೆಯ ನೆನಪು ನಿನಗೆ ಕುಂದಿತೆ ?
ಹುರುಪು ಹೊಸತು ಹರೆಯೂ ಹೊಸತು ನೀ ನನ್ನ ಜೊತೆಯಾದಾಗ .. 
ಮುಪ್ಪಿನಲ್ಲೂ ಮುತ್ತ ನಾ ನೀಡುವೆ ಮತ್ತೊಮ್ಮೆ ಬಾ ಬಳಿಗೆ ಕಾದಿರುವೆ ನಾ ಈಗ .. 



ಅಜ್ಞಾನಿಯೋ ಸುಜ್ಞಾನಿಯೋ ಅರಿಯೆ ನಾ ಎಲ್ಲರ ಮಹಿಮೆ 
ನಿನ್ನ ಚಲನ ವಲನ ಛಾಯೆಯ ಚಳಿಯೇ ಸಾಕೇನಗೆ ಸೇವೆ. 
ಅಪ್ರಾಸದಾ ಪದವ ಹುಡುಕುವ ತವಕದಿ ... 
ನಿನ್ನೆನಸಿ ಹೃದಯ ಅಂದಿದೆ ಧಿಮಿ ಧಿಮಿ !! 



ದಡದಲ್ಲಿ ನಿಂತು ನೋಡಿದ ಮಾತ್ರಕ್ಕೆ ಸಾಗರ ದಾಟಲಾಗದು 
ಹಪ್ಹ ಹಪಿಸಿ ಹೊಯ್ದ ಹತಾಸೆಯೆ ಜೀವನದ ಭಾಗವಾಗದು 
ತೋರು ಬೆರಳಿನಾ ತುದಿಯಲಿ ನನ್ನಾಸೆಗಳು ನುಸುಳಲು .. 
ನೀರಿನಂತರದಲಿ ಸಾಗಿದೆ ಉಸಿರಿನ ಉಷೆ ನಿನ್ನೊಡಲ ತಲುಪಲು .. 



ಆಕ್ಷಿ❤





Friday, March 24, 2017

ಬೆಂಕೀ ಪೊಟ್ಟಣ

!...
ಪ್ರೀತಿ ಮಾಡಿ ಹೃದಯ ಸುಟ್ಟುಕೊಂಡ ಘಟನೆಗಳು ಹಲವಾರು
ಹೊಸದೊಂದು ಬೆಂಕಿ ಪೊಟ್ಟಣ ಹಿಡಿದು ಬಂದಿರುವ ಚೆಲುವೇ ನೀನ್ಯಾರು !!!

Saturday, August 6, 2016

ಕವಿತೇ

ಕವಿತೇ ಬರೆಯಲು ಕವಿಯಾಗಬೇಕೆಂದಲ್ಲ
ಪ್ರಿಯತಮೆಯ ಸವಿ ನೆನಪುಗಳೇ ಸಾಕಲ್ಲ ...